Friday, January 7, 2011

ಮಂಜಿನಹನಿಗಳ ಆಟೊಗ್ರಾಫ್


ತಡವಾಗಿ ಬಂದರೂ ಈ ಬಾರಿಯ ಮಳೆಗಾಲದ ಮೆರೆತವನ್ನೂ ಮರೆಸುವಷ್ಟು ಪ್ರಾಬಲ್ಯ ಮೆರೆದದ್ದು ಮಾಗಿ ಚಳಿ.ಎಡೆ ಬಿಡದೆ ಬೀಸುವ ಚಳಿ-ಗಾಳಿ,ಮಂಜು ತುಂಬಿದ ಮುಂಜಾವು,ಬೆತ್ತಲಾಗಿ ನಿಂತ ಗಿಡ-ಮರಗಳು,ಹಾಡಿದಷ್ಟೂ ಮುಗಿಯದ ಖಗ ವೃಂದಗಾನ...ಕೊರೆಯುವ ಮುಂಜಾವಿನಲಿ ಮನೆಹೊರಗೆ ಒಮ್ಮೆ ಇಣುಕಿ ನೊಡಿದಾಗ,ಅಲ್ಲಿ ಸುರಿವ ಮಂಜು ಸೃಷ್ಠಿಸಿರುವ ಹೊಸದೊಂದು ಲೊಕ..,ಆಗಷ್ಟೇ ರೂಪತಳೆದಿರುವ ಪಲ್ಲವಗಳ ಮೇಲೆಲ್ಲಾ ಮಂಜಹನಿಗಳು ಮೂಡಿಸಿರುವ,ಯಾವ ಚಿತ್ರಗಾರನಿಗೂ ನಿಲುಕದ ಅಪೂರ್ವ ಚಿತ್ತಾರ..,ಹೀಗೆ ಚಳಿಗಾಲದ ಸೊಬಗಿಗೆ ಸಾಟಿಯಿಲ್ಲ.ಈ ಬಾರಿಯ ಚಳಿಗಾಲವನ್ನು ಮನಸಾರೆ ಅನುಭವಿಸಿದವರಿಗೆ ಮಾಗಿ ಚಳಿಗೆ ವಿದಾಯ ಹೇಳುವ ಸಮಯ ಹತ್ತಿರ ಬರುತ್ತಿರುವುದು ಎನನ್ನೋ ಕಳಕೊಂಡ ವಿಚಿತ್ರ ಅನುಭವ ನೀಡುವುದಂತೂ ಸುಳ್ಳಲ್ಲ. ..ಚಳಿಗಾಲದ ಈ ಸಂಭ್ರಮವನ್ನು ಇನ್ನೊಮ್ಮೆ ಸವಿಯುವ ಆಶಯದಲ್ಲಿ,ವಲಸೆ ಹೋಗುವ ಬೆಳ್ಳಕ್ಕಿ ಸಾಲುಗಳನ್ನು ಮತ್ತೆ ಕಣ್ತುಂಬಿಕೊಳ್ಳುವ ಕಾತರದಲ್ಲಿ,ಚಳಿಗಾಲವನ್ನು ಬೀಳ್ಕೊಡಲೇ ಬೇಕು..ಈ ಚಳಿಗಾಲದ ನೆನೆಪಿಗಾಗಿ,ಹೊರಡುವ ಮುನ್ನ ಮಂಜಿನಹನಿಗಳು ನೀಡಿರುವ ಆಟೊಗ್ರಾಫ್..
ಮುತ್ತಿನ ತೋರಣ

ಮಂಜಿನ ಮೆರವಣಿಗೆ

ಇಬ್ಬನಿ ತಬ್ಬಿದಾಗ

ಗುಲಾಬಿಯೂ ನಾಚಿ..

ಮಂಜು-ಮುಂಜಾವಿನ ದೃಶ್ಯ-ಕಾವ್ಯ